ಜಂಭದ ಹುಡುಗಿ ಪ್ರಿಯಾ ಹಾಸನ್ ನಿರ್ದೇಶಿಸಿದ ೨೦೦೭ ರ ಕನ್ನಡ ಭಾಷೆಯ ರೋಮ್ಯಾಂಟಿಕ್ ಡ್ರಾಮಾ ಚಿತ್ರ. ಈ ಚಿತ್ರದಲ್ಲಿ ಸ್ವತಃ ಪ್ರಿಯಾ ಅವರು, ಜೈ ಆಕಾಶ್ ಮತ್ತು ಯಶ್ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಯಶಸ್ವಿಯಾಗಿ ನೂರು ದಿನ ಓಡಿತು. ಈ ಚಿತ್ರದ ಮೂಲಕ ನಟ ಯಶ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. == ತಾರಾಗಣ == ಪ್ರಿಯಾ ಆಗಿ ಪ್ರಿಯಾ ಹಾಸನ್ ರಾಕೇಶ್ ಪಾತ್ರದಲ್ಲಿ ಜೈ ಆಕಾಶ್ ಲಕ್ಷ್ಮಿಕಾಂತ್ ಪಾತ್ರದಲ್ಲಿ ಯಶ್ ರಮೇಶ್ ಭಟ್ ಪ್ರಿಯಾಳ ತಾಯಿಯಾಗಿ ಜಯಂತಿ ಭವ್ಯ ಗಿರಿಜಾ ಲೋಕೇಶ್ == ವಿವಾದ == ಚಿತ್ರಕ್ಕೆ ಕರ್ನಾಟಕ ಸರ್ಕಾರ ಸಬ್ಸಿಡಿ ನೀಡಿಲ್ಲ . "ಗರ್ಭಧಾರಣೆಯ ಸುತ್ತ ಕಥೆ ಸುತ್ತುತ್ತದೆ; ಧೂಮಪಾನ, ಮದ್ಯಪಾನ, ಹಿಂಸೆ ಇತ್ಯಾದಿಗಳ ಪರಿಣಾಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ" ಎಂದು ಅರ್ಜಿಗಳು ಹೇಳುತ್ತವೆ. == ಧ್ವನಿಮುದ್ರಿಕೆ == ರಾಜೇಶ್ ರಾಮನಾಥ್ ಅವರು ಹಾಡುಗಳನ್ನು ಸಂಯೋಜಿಸಿದ್ದಾರೆ. "ಭೂಮಿ ಯಾತೆ ನೀನು" - ಕೆ.ಎಸ್.ಚಿತ್ರಾ "ಲೈಫ್ ಫ್ಯಾಂಟಸಿ" - ಚೈತ್ರಾ ಎಚ್.ಜಿ "ನೋಡಿ ನೋಡಿ" - ರಾಜೇಶ್ ಕೃಷ್ಣನ್ "ಗಾಳ ಹಾಕಿ" - ಹೇಮಂತ್ ಕುಮಾರ್, ಶಮಿತಾ "ಮುತ್ತು ಮುತ್ತು" - ಚೇತನ್ ಸಾಸ್ಕಾ, ಶಮಿತಾ == ಪ್ರತಿಕ್ರಿಯೆ == ಚಿತ್ರಲೋಕ ಡಾಟ್‌ಕಾಮ್‌ನ ವಿಮರ್ಶಕರು " ಜಂಭದ ಹುಡುಗಿ ಆಹ್ಲಾದಕರವಾದ ವೀಕ್ಷಣೆಯನ್ನು ಮಾಡಿ ಕೊಡುತ್ತದೆ. ಕನ್ನಡ ಅಭಿಮಾನಿಗಳು ಪ್ರಿಯಾ ಹಾಸನ್ ಅವರಂತಹ ಉದಯೋನ್ಮುಖ ಪ್ರತಿಭೆಯನ್ನು ನೋಡಿ ಪ್ರೋತ್ಸಾಹಿಸಬೇಕು" ಎಂದು ಬರೆದಿದ್ದಾರೆ. ಇಂಡಿಯಾಗ್ಲಿಟ್ಜ್‌ನ ವಿಮರ್ಶಕರೊಬ್ಬರು ಚಲನಚಿತ್ರವನ್ನು ಹತ್ತರಲ್ಲಿ ಆರು ಎಂದು ರೇಟ್ ಮಾಡಿದ್ದಾರೆ ಮತ್ತು "ಇದು ಕೇವಲ ಪೀಡಿತ ಕುಟುಂಬಗಳಿಗೆ ಮಾತ್ರವಲ್ಲದೆ ಭಾರತೀಯ ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೂ ಇರುವ ಒಂದು ಚಲನಚಿತ್ರ" ಎಂದು ಬರೆದಿದ್ದಾರೆ. == ಪ್ರಶಸ್ತಿಗಳು == ಕನ್ನಡ ಚಲನಚಿತ್ರೋದ್ಯಮ ನಿರ್ದೇಶಕರ ಸಂಘ - ಅತ್ಯುತ್ತಮ ಚೊಚ್ಚಲ ನಿರ್ದೇಶಕಿ - ಪ್ರಿಯಾ ಹಾಸನ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಜಂಭದ ಹುಡುಗಿ @ ಐ ಎಮ್ ಡಿ ಬಿ